ಲೇಟೆಸ್ಟ್ ಆಗಿ ರಿಲೀಸ್ ಘೋಷಣೆಯಾದ ಸ್ಯಾಂಡಲ್ ವುಡ್ ಸಿನಿಮಾಗಳು

ಬೆಂಗಳೂರು| Krishnaveni K| Last Modified ಮಂಗಳವಾರ, 27 ಜುಲೈ 2021 (12:30 IST)
ಬೆಂಗಳೂರು: ಅನ್ ಲಾಕ್ 4 ರಲ್ಲಿ ರಾಜ್ಯ ಸರ್ಕಾರ ಥಿಯೇಟರ್ ಗಳನ್ನು ಶೇ.50 ರಷ್ಟು ಪ್ರೇಕ್ಷಕರ ಹಾಜರಾತಿಯಲ್ಲಿ ತೆರೆಯಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಕೆಲವು ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಯಾಗಿದೆ.

 
ಹೆಚ್ಚಿನ ನಿರ್ಮಾಪಕರು ಆಗಸ್ಟ್-ಸೆಪ್ಟೆಂಬರ್ ನಲ್ಲಿಯೇ ಸಿನಿಮಾ ರಿಲೀಸ್ ಮಾಡಲು ಹೊರಟಿದ್ದಾರೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಸಲಗ ಆಗಸ್ಟ್ 20 ಕ್ಕೆ ರಿಲೀಸ್ ಆಗುತ್ತಿದೆ. ಅದೇ ದಿನ ದೊಡ್ಮನೆ ಹುಡುಗಿ ಧನ್ಯಾ ರಾಮ್ ಕುಮಾರ್, ಸೂರಜ್ ಗೌಡ ಅಭಿನಯದ ‘ನಿನ್ನ ಸನಿಹಕೆ’ ತೆರೆ ಕಾಣುತ್ತಿದೆ.
 
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸೆಪ್ಟೆಂಬರ್ 10 ಕ್ಕೆ ರಿಲೀಸ್ ಆಗಲಿದೆ.  ಇನ್ನು, ಡಾಲಿ ಧನಂಜಯ್ ನಾಯಕರಾಗಿರುವ ‘ಬಡವ ರಾಸ್ಕಲ್’ ಸಿನಿಮಾ ಸೆಪ್ಟೆಂಬರ್ 24 ಕ್ಕೆ ರಿಲೀಸ್ ಆಗುತ್ತಿದೆ.  ಇನ್ನೂ ಹಲವು ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ‍್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :