ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಸಾಲು ಸಾಲು ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿವೆ. ಬಹುತೇಕ ಹೊಸಬರ ಸಿನಿಮಾಗಳೇ ಎನ್ನುವುದು ವಿಶೇಷ.ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಡೊಳ್ಳು ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದು, ಕಾರ್ತಿಕ್, ಮಹೇಶ್, ನಿಧಿ ಹೆಗ್ಡೆ ಮುಂತಾದವರು ಅಭಿನಯಿಸಿದ್ದಾರೆ.ಡಾ. ರಾಜ್ ಕುಟುಂಬದ ಮತ್ತೊಬ್ಬ ಕುಡಿ ಧೀರೇನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ ಶಿವ 143 ಇಂದು ತೆರೆ ಕಾಣುತ್ತಿದೆ.