ಬೆಂಗಳೂರು: ಈಗಷ್ಟೇ ಕೊರೋನಾ ಎರಡನೇ ಅಲೆಯಿಂದ ಚೇತರಿಸಿಕೊಂಡು ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಹಾಗಿದ್ದರೂ ಸಿನಿಮಾ ರಿಲೀಸ್ ಇನ್ನೂ ಶುರುವಾಗಿಲ್ಲ.ಆದರೆ ಅದಕ್ಕೂ ಮೊದಲೇ ಸ್ಯಾಂಡಲ್ ವುಡ್ ಗೆ ಮತ್ತೊಂದು ಲಾಕ್ ಡೌನ್ ಭಯ ಶುರುವಾಗಿದೆ. ಕೊರೋನಾ ಮೂರನೇ ಅಲೆಯ ಭೀತಿಯಲ್ಲಿರುವ ಕರ್ನಾಟಕದಲ್ಲಿ ಪ್ರಕರಣಗಳು ಹೆಚ್ಚಾದರೆ ಮತ್ತೆ ಲಾಕ್ ಡೌನ್ ಸಂಕಷ್ಟ ಎದುರಾಗಬಹುದು.ಇದರಿಂದ ಈಗಾಗಲೇ ಆರಂಭವಾಗಿರುವ ಸಿನಿಮಾ ಶೂಟಿಂಗ್ ಗಳು ನಿಂತುಹೋಗಬಹುದು ಎಂಬ ಭಯವಿದೆ. ಘೋಷಣೆಯಾದ ಸಿನಿಮಾಗಳೂ ರಿಲೀಸ್ ಡೇಟ್ ಮುಂದೂಡಿ ಕೂತಿದೆ.