ಅಭಿನಯ ಶಾರದೆ ಜಯಂತಿಗೆ ವಿದಾಯ ಹೇಳಿದ ಸ್ಯಾಂಡಲ್ ವುಡ್

ಬೆಂಗಳೂರು| Krishnaveni K| Last Modified ಸೋಮವಾರ, 26 ಜುಲೈ 2021 (10:29 IST)
ಬೆಂಗಳೂರು: ಇಂದು ನಿಧನರಾದ ಹಿರಿಯ ನಟಿ ಜಯಂತಿಗೆ ಸ್ಯಾಂಡಲ್ ವುಡ್ ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ.
 > ಹಿರಿಯ ನಟಿಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವರು ಕಂಬನಿ ವ್ಯಕ್ತಪಡಿಸಿದ್ದಾರೆ.>   ಅಮ್ಮಾವ್ರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದರ್ಶನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು, ರಿಯಲ್ ಸ್ಟಾರ್ ಉಪೇಂದ್ರ ನಿಮ್ಮ ಆರಾಧಕ ನಾನು. ನೀವು ಎಲ್ಲಾ ಕನ್ನಡ ಚಿತ್ರಾಭಿಮಾನಿಗಳ ಮನಸ್ಸಲ್ಲಿ ಅಮರರಾಗಿರುತ್ತೀರಿ. ಮತ್ತೆ ಹುಟ್ಟಿ ಬರಲೇಬೇಕು ನೀವು ಎಂದಿದ್ದಾರೆ.
 
ಇವರಲ್ಲದೆ ನಟಿ ರಕ್ಷಿತಾ ಪ್ರೇಮ್, ಶ್ರುತಿ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರು ಜಯಂತಿ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :