Widgets Magazine

ಚೀನಾ ಆಪ್ ನಿಷೇಧ ಬಗ್ಗೆ ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ?

Chinese Apps
ಬೆಂಗಳೂರು| Krishnaveni K| Last Modified ಮಂಗಳವಾರ, 30 ಜೂನ್ 2020 (09:42 IST)
ಬೆಂಗಳೂರು: ಗಡಿಯಲ್ಲಿ ತಕರಾರು ತೆಗೆದಿರುವ ಚೀನಾಗೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಚೀನಾದ 59 ಆಪ್ ಗಳಿಗೆ ನಿಷೇಧ ಹೇರಿದ ಬಗ್ಗೆ ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ?
 

ಟಿಕ್ ಟಾಕ್ ಬ್ಯಾನ್ ಮಾಡಿರುವುದನ್ನು ತಾರೆಯರು ಖುಷಿಯಿಂದಲೇ ಸ್ವಾಗತಿಸಿದ್ದಾರೆ. ಚೀನಾ ಆಪ್ ಗಳ ಪೈಕಿ ಟಿಕ್ ಟಾಕ್ ತಾರೆಯರಿಗೆ ಹೆಚ್ಚು ಆಪ್ತವಾಗಿತ್ತು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸದಾ ಟಿಕ್ ಟಾಕ್ ವಿಡಿಯೋ ಪೋಸ್ಟ್‍ ಮಾಡುತ್ತಿದ್ದ ತಾರೆಯರು ಈ ನಿಷೇಧವನ್ನು ಖುಷಿಯಿಂದಲೇ ಸ್ವಾಗತಿಸಿದ್ದಾರೆ.
 
ಚೀನಾ ಆಪ್ ಬ್ಯಾನ್ ಮಾಡಿರುವುದು ಅತ್ಯುತ್ತಮ ನಿರ್ಧಾರ ಎಂದು ನಟ ಸೃಜನ್ ಲೋಕೇಶ್, ರಕ್ಷಿತಾ ಪ್ರೇಮ್ ಸೇರಿದಂತೆ ಹಿರಿತೆರೆ, ಕಿರುತೆರೆ ಕಲಾವಿದರೂ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ವಾಗತಿಸಿದ್ದಾರೆ. ಅದಲ್ಲದೆ, ಸ್ಟಾರ್ ನಟರ ಅಭಿಮಾನಿ ಬಳಗದವರೂ ಈಗಾಗಲೇ ತಮ್ಮ ಟಿಕ್ ಟಾಕ್ ವಿಡಿಯೋಗಳನ್ನು ಡಿಲೀಟ್ ಮಾಡಿ ಕೇಂದ್ರದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :