ಬೆಂಗಳೂರು: ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮ್ಮ ಉಡುಗೆ ಬಗ್ಗೆ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ಸಂಜನಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಎದೆಸೀಳು ದರ್ಶನ ಮಾಡುವ ಗ್ಲಾಮರಸ್ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿದ ಮಹಿಳಾ ಟ್ವಿಟರಿಗರೊಬ್ಬರು ನಿನಗೆ ಟಾಪ್ ಲೆಸ್ ಡ್ರೆಸ್ ಉತ್ತಮ ಎಂದಿದ್ದಲ್ಲದೆ, ನಿನ್ನಂಥವರು ಈ ರೀತಿಯ ಡ್ರೆಸ್ ಹಾಕುವುದರಿಂದಲೇ ಪುರುಷರು ಉದ್ರೇಕಗೊಳ್ಳುವುದು. ನಾಚಿಕೆಯಾಗಬೇಕು ನಿನಗೆ ಎಂದು