ಸಂಜನಾ, ರಾಗಿಣಿ ಡ್ರಗ್ ಸೇವಿಸಿದ್ದು ನಿಜ: ಪರೀಕ್ಷೆಯಿಂದ ದೃಢ

ಬೆಂಗಳೂರು| Krishnaveni K| Last Modified ಮಂಗಳವಾರ, 24 ಆಗಸ್ಟ್ 2021 (11:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಡ್ರಗ್ ಸೇವನೆ ಎಫ್ಎಸ್ಎಲ್ ವರದಿಯಿಂದ ದೃಢಪಟ್ಟಿದೆ.
 > ಇದನ್ನು ಸ್ವತಃ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಖಚಿತಪಡಿಸಿದ್ದಾರೆ. ಇಬ್ಬರ ಬಂಧನದ ಅವಧಿಯಲ್ಲಿ ಕೂದಲು ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಲಾಗಿತ್ತು. ಅದರಂತೆ ಇದೀಗ ವರದಿ ಹೊರಬಂದಿದ್ದು, ಇಬ್ಬರೂ ಡ್ರಗ್ ಸೇವಿಸಿರುವುದು ದೃಢಪಟ್ಟಿದೆ.>   ಡ್ರಗ್ ಕಿಂಗ್ ಪಿನ್ ವೀರೇಶ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಇವರು ಭಾಗಿಯಾಗುತ್ತಿದ್ದರು. ಈತನೇ ಈ ನಟಿಯರು ಸೇರಿದಂತೆ ಇತರರಿಗೆ ಡ್ರಗ್ ಹಂಚುತ್ತಿದ್ದ ಎಂದು ಪತ್ತೆಯಾಗಿತ್ತು. ಈಗ ಇಬ್ಬರೂ ಡ್ರಗ್ ಸೇವನೆ ಮಾಡಿರುವುದು ಖಾತ್ರಿಯಾಗಿದ್ದು, ಸಿಸಿಬಿಗೆ ಮತ್ತಷ್ಟು ಬಲಬಂದಂತಾಗಿದೆ.ಇದರಲ್ಲಿ ಇನ್ನಷ್ಟು ಓದಿ :