ಡ್ರಗ್ ಆರೋಪದ ಬಗ್ಗೆ ಮೌನವಹಿಸಿದ ರಾಗಿಣಿ, ಸಂಜನಾ

ಬೆಂಗಳೂರು| Krishnaveni K| Last Modified ಬುಧವಾರ, 25 ಆಗಸ್ಟ್ 2021 (08:45 IST)
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ ಎಂದು ಎಫ್ಎಸ್ಎಲ್ ವರದಿ ಬಂದಿದೆ. ಹೀಗಿದ್ದರೂ ನಟಿಯರಿಬ್ಬರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿದಂತಿದೆ.
 > ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರೂ ಈ ಪ್ರಕರಣದ ಕುರಿತು ನೇರವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಸಂದೇಶ ನೀಡಿದ್ದಾರೆ. ಆದರೆ ರಾಗಿಣಿ ದ್ವಿವೇದಿ ಯಾವುದೂ ನೀವು ಅಂದುಕೊಂಡಂತೇ ನಡೆಯದೇ ಹೋದರೂ ನಿರಾಶರಾಗದೇ ದೇವರ ಆಟವನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.>   ನಿನ್ನೆಯಷ್ಟೇ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಇಬ್ಬರೂ ಡ್ರಗ್ ಸೇವನೆ ಮಾಡಿರುವುದು ಖಚಿತಗೊಂಡಿದೆ ಎಂದಿದ್ದರು. ಈ ಬಗ್ಗೆ ಇಬ್ಬರೂ ಮತ್ತೆ ವಿಚಾರಣೆಗೊಳಗಾಗುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :