Photo Courtesy: Twitterಬೆಂಗಳೂರು: ಶ್ರೀನಗರ ಕಿಟ್ಟಿ, ರಮ್ಯಾ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಸಂಜು ಮತ್ತು ವೆಡ್ಸ್ ಗೀತಾ ಸಿನಿಮಾ ಎವರ್ ಗ್ರೀನ್ ಹಿಟ್ ಆಗಿತ್ತು. ಇದೀಗ ಆ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗುತ್ತಿದೆ.ಈ ಬಾರಿ ರಮ್ಯಾ ಜಾಗಕ್ಕೆ ಹೀರೋಯಿನ್ ಆಗಿ ಡಿಂಪಲ್ ಕ್ವೀನ್ ರಚಿತಾ ರಾಂ ಬಂದಿದ್ದಾರೆ. ಈಗಾಗಲೇ ಚಿತ್ರತಂಡ ಫೋಟೋ ಶೂಟ್ ಕೂಡಾ ಮುಗಿಸಿತ್ತು. ಇದೀಗ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದು, ಚಿತ್ರಕ್ಕೆ ಚಾಲನೆ ನೀಡಿದೆ.