ಬೆಂಗಳೂರು : ಕನ್ನಡದ ಬಿಳಿ ಹೆಂಡ್ತಿ ಸಿನಿಮಾದಲ್ಲಿ ನಟಿಸಿದ ಹಿರಿಯ ನಟ ಅನಿಲ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಹಾಗೇ ಅನಿಲ್ ಅವರ ಕೊನೆ ಆಸೆಯಂತೆ ಅವರ ಪಾರ್ಥೀವ ಶರೀರವನ್ನ ಎಂ.ಎಸ್ ರಾಮಯ್ಯ ಕಾಲೇಜ್ ಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದ 1975ರಲ್ಲಿ ಬಿಡುಗಡೆಯಾದ