ಮುಂಬೈ: ಕೆಜಿಎಫ್ ನಂತಹ ಅದ್ಭುತ ಸಿನಿಮಾ ಮಾಡಿ ಕನ್ನಡ ಸಿನಿಮಾ ರಂಗದ ತಾಕತ್ತು ಏನೆಂದು ತೋರಿಸಿದ ಮೇಲೂ ಪರಭಾಷೆಯ ಕೆಲವರು ಈಗಲೂ ಕನ್ನಡ ಸಿನಿಮಾ ವೀಕ್ಷಕರನ್ನು ಕಡೆಗಣಿಸುತ್ತಿದ್ದಾರೆ.ಇದೀಗ ಅದೇ ತಪ್ಪು ಮಾಡಲು ಹೋಗಿ ಬಾಲಿವುಡ್ ನಟ ಶಾರುಖ್ ಖಾನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾರುಖ್ ಸಿನಿ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ‘ಪಠಾಣ್’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ