ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಬದುಕಿದ್ದಾಗಲೂ ಸಾಕಷ್ಟು ಸಂಕಷ್ಟ ಅನುಭವಿಸಿದರು. ಈಗ ತೀರಿಕೊಂಡು ಇಷ್ಟು ವರ್ಷವಾದ ಮೇಲೂ ಅವರಿಗೆ ಆಗುತ್ತಿರುವ ಅನ್ಯಾಯ ಮಾತ್ರ ನಿಂತಿಲ್ಲ.ಮೊನ್ನೆಯಷ್ಟೇ ಕಿಡಿಗೇಡಿಗಳು ಅವರ ಮೂರ್ತಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಶಶಿಕುಮಾರ್ ‘ಇಂತಹ ಘಟನೆಗಳು ಪದೇ ಪದೇ ನಡೀತಾ ಇರೋದು ಹೃದಯವನ್ನು ಸಿಕ್ಕಾಪಟ್ಟೆ ಘಾಸಿ ಮಾಡಿದೆ. ಅಪ್ಪಾಜಿ ಮೂರ್ತಿ ಒಡೆದವರಿಗೆ ಶಿಕ್ಷೆ ಆಗಲೇಬೇಕು.