Widgets Magazine

8 ಲಕ್ಷ ವೀಕ್ಷಣೆ ಪಡೆದ ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಟೀಸರ್

window seat
ಬೆಂಗಳೂರು| Rajesh patil| Last Updated: ಮಂಗಳವಾರ, 17 ನವೆಂಬರ್ 2020 (13:23 IST)
ಸ್ಯಾಂಡಲ್‌ವುಡ್‌ನಲ್ಲಿಗ ವಿಂಡೋಸೀಟ್ ಚಿತ್ರದ್ದೆ ಮಾತುಕತೆ. ಟೀಸರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ಕುತೂಹಲ ಇನ್ನೂ ಹೆಚ್ಚಾಗಿದೆ. ಟೀಸರ್ ನೋಡಿದ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸೋದ್ರ ಜೊತೆಗೆ ಸಿನಿಮಾ ಮೇಲಿನ ತಮ್ಮ ನಿರೀಕ್ಷೆಯನ್ನು ಹೊರಹಾಕಿದ್ದಾರೆ. 
ಇಲ್ಲಿವರೆಗೆ ಬರೋಬ್ಬರಿ ಎಂಟು ಲಕ್ಷ ಮಂದಿ ವಿಂಡೋಸೀಟ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಟೀಸರ್ ಹಾಗೂ ಚಿತ್ರದ ಪ್ರತಿಯೊಂದು ಅಪ್ಡೇಟ್ಗೂ ಸಿಕ್ತಿರೋ ರೆಸ್ಪಾನ್ಸ್ ನೋಡಿ ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. 
window seat
ಮೊದಲ ಸಿನಿಮಾದಲ್ಲೇ ಕನ್ನಡ ಸಿನಿರಸಿಕರ ಮನಗೆದ್ದ ರಂಗಿತರಂಗ ಚಿತ್ರದ ಮೋಡಿಗಾರ ನಿರೂಪ್ ಭಂಡಾರಿ ಈ ಚಿತ್ರದ ನಾಯಕ ನಟನಾಗಿ ನಟಿಸಿದ್ದು ಸಂಜನಾ ಆನಂದ್, ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯರಾಗಿ ವಿಂಡೋಸೀಟ್ ಚಿತ್ರದಲ್ಲಿ ಕಾಣಸಿಗಲಿದ್ದಾರೆ. ರೊಮ್ಯಾಂಟಿಂಕ್ ಥ್ರಿಲ್ಲರ್ ಕಥಾಹಂದರವವುಳ್ಳ ವಿಂಡೋಸೀಟ್ ಚಿತ್ರದಲ್ಲಿ ರವಿಶಂಕರ್,
window seat
ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ವಿಂಡೋಸೀಟ್‌ಗೆ ಎಲ್ಲೆಡೆ ಸಿಕ್ತಿರೋ ಪ್ರತಿಕ್ರಿಯೆ ಚಿತ್ರತಂಡದ ವಿಶ್ವಾಸ ಹೆಚ್ಚಿಸಿದ್ದು ಸದ್ಯದಲ್ಲೇ ಚಿತ್ರದ ಬಿಡುಗಡೆ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಲಿದೆ.

 Teaser Link : https://www.youtube.com/watch?v=oEN9A4foqMc&t=4s
 ಇದರಲ್ಲಿ ಇನ್ನಷ್ಟು ಓದಿ :