ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಈಗ ಡೈರೆಕ್ಟರ್

ಬೆಂಗಳೂರು| Krishnaveni K| Last Modified ಸೋಮವಾರ, 22 ಜೂನ್ 2020 (10:41 IST)
ಬೆಂಗಳೂರು: ಕನ್ನಡ ಸುದ್ದಿ ವಾಹಿನಿಯಲ್ಲಿ ವಾಚಕಿಯಾಗಿ ಗಮನ ಸೆಳೆದಿದ್ದ ಶೀತಲ್ ಶೆಟ್ಟಿ ಬಳಿಕ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
 > ಇದೀಗ ಶೀತಲ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ನಿರ್ದೇಶನ ಮಾಡಲು ಹೊರಟಿದ್ದಾರೆ. ಶೀತಲ್ ಶೆಟ್ಟಿ ನಿರ್ದೇಶಿಸಲಿರುವ ಹೊಸ ಸಿನಿಮಾ ‘ವಿಂಡೋಸೀಟ್’ ಫಸ್ಟ್ ಲುಕ್ ಬಿಡುಗಡೆಯಾಗಿದೆ.>   ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ನಾಯಕರಾಗಿದ್ದು ಜ್ಯಾಕ್ ಮಂಜು ಸಿನಿಮಾ ನಿರ್ಮಿಸುತ್ತಿದ್ದಾರೆ. ಶೀತಲ್ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ನೋಡಿದರೆ ಇದು ಥ್ರಿಲ್ಲರ್ ಸಿನಿಮಾವಾಗಿರಬಹುದು ಎಂಬ ಕಲ್ಪನೆ ಕೊಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :