ಬಿಜೆಪಿ ಸರ್ಕಾರ ಬಂದ ಬಳಿಕ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.22ರಷ್ಟು ಹೆಚ್ಚಿವೆ ಎಂದು ಟೀಕಿಸಿದ್ದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಗಣೇಶ್ ಹರಿಹಾಯ್ದಿದ್ದಾರೆ. ಮೇಡಮ್ ರಮ್ಯಾ.. ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಬಹಳಷ್ಟು ಸೇವೆ ಮಾಡುತ್ತಿದ್ದೀರಿ ಅದನ್ನ ಮುಂದುವರಿಸಿ. ಆದರೆ, ದಯವಿಟ್ಟು ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ. ನಿರ್ಭಯಾ ರೇಪ್ ಪ್ರಕರಣದಲ್ಲಿ ಸೂಕ್ತ ಕ್ರಮ ಜರುಗಿಸದಿದ್ದಕ್ಕೆ ದೆಹಲಿಯಲ್ಲಿ ಕಾಂಗ್ರೆಸ್