ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಣ್ಣೀರಿಟ್ಟು ಭಾವುಕರಾದ ಘಟನೆ ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ನಿಧನರಾಗಿ ಇಂದಿಗೆ ನಾಲ್ಕು ವರ್ಷ ಸಂದಿವೆ.ಅಪ್ಪನ ಸಾವಿನ ದಿನ ನೆನಪು ಮಾಡಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ಭಾವುಕರಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಮಿಸ್ ಯು ಡ್ಯಾಡ್, ಲವ್ ಯು ಡ್ಯಾಡಿ. ನಾವು ನಿಮ್ಮನ್ನು ಕಳೆದುಕೊಂಡು ನಾಲ್ಕು ವರ್ಷಗಳಾಗಿವೆ ಎಂದು ಬರೆದುಕೊಂಡಿದ್ದಾರೆ.