ಇದೇ 21 ಕ್ಕೆ ಬಯಲಾಗತ್ತೆ 'ಶಿವಾಜಿ ಸುರತ್ಕಲ್ ರಹಸ್ಯ'

ಕೊಲೆಯ ಜಾಡು ಕಂಡುಹಿಡಿಯಲು ಡಿಟೆಕ್ಟರ್ ಆದ ರಮೇಶ್ ಅರವಿಂದ್

shivaji suratkal
ಬೆಂಗಳೂರು| rajesh patil| Last Modified ಬುಧವಾರ, 19 ಫೆಬ್ರವರಿ 2020 (13:11 IST)
ವಾರಕ್ಕೆ ಏನಿಲ್ಲವಾದ್ರೂ 5-6 ಸಿನ್ಮಾ ಗಳು ರಿಲೀಸ್ ಆಗ್ತಿರೋ ಗಾಂಧಿನಗರದಲ್ಲಿ ತಮ್ಮಿಷ್ಟದ ನಟನ ಸಿನ್ಮಾ ಬರ್ತಿದೆ ಅಂದ್ರೆ ಅಲ್ಲೊಂದಿಷ್ಟು  ನಿರೀಕ್ಷೆ ಸಾಮಾನ್ಯವಾಗೇ ಇರತ್ತೆ.ಅಂತ್ರದ್ರಲ್ಲಿ 100 ಸಿನ್ಮಾಗಳ ಸರದಾರ,ಸ್ಯಾಂಡಲ್‍ವುಡ್‍ ತ್ಯಾಗರಾಜ, ನಟ,ನಿರ್ದೇಶಕ,ನಿರ್ಮಾಪಕ, ನಿರೂಪಕ ಹೀಗೆ ಬಹುರೂಪ ಪ್ರತಿಭೆಯಾಗಿರೋ ರಮೇಶ್ ಅರವಿಂದ್ ಅವರ ಚಿತ್ರ ತೆರೆಕಾಣ್ತಿದೆ ಅಂದ್ರೆ ಅಭಿಮಾನಿಗಳು ಆ ದಿನವನ್ನ ಎದುರುನೋಡದೇ ಇರ್ತಾರ..?ಅದು ಶಿವರಾತ್ರಿ ಹಬ್ಬದ ಖುಷಿ ಜೊತೆ ‘ಶಿವಾಜಿ ಸುರತ್ಕಲ್’ ಚಿತ್ರ ಕೂಡ ತೆರೆಕಾಣ್ತರೋ ಡಬಲ್ ಖುಷಿನಾ ಸಲೆಬ್ರೇಟ್ ಮಾಡದೇ ಇರೋಕ್ ಆಗತ್ತಾ..?
ಪೊಸ್ಟರ್,ಟೀಸರ್,ಟ್ರೈಲರ್ ಅಂತ  ಶುರುವಾದಾಗಿನಿಂದ ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿದ್ದ ಶಿವಾಜಿ ಸುರತ್ಕಲ್ ಚಿತ್ರ ಇದೇ 21 ಕ್ಕೆ ಥಿಯೇಟರ್ ಗೆ ಎಂಟ್ರಿ ಕೊಡ್ತಿದೆ..ಇದೇ ಮೊದಲ ಬಾರಿಗೆ  ಡಿಟೆಕ್ಟಿವ್ ಗೆಟಪ್ ನಲ್ಲಿ ಎರಡು ವಿಭಿನ್ನ ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ತಿದ್ದಾರೆ.
shivaji suratkal
 ಆಕಾಶ್ ಶ್ರೀವತ್ಸ ನಿರ್ದೇಶನವಿರೋ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ನ  ‘ಶಿವಾಜಿ ಸುರತ್ಕಲ್’ ನಲ್ಲಿ ರಣಗಿರಿಯಲ್ಲಿ ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ ಪಾತ್ರಕ್ಕೆ ರಮೇಶ್ ಅರವಿಂದ್ ಬಣ್ಣಹಚ್ಚಿದ್ದಾರೆ.
shivaji suratkal

ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವರ ತಾರಾಬಳಗವಿರೋ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ಕೈ ,ಚಳಕ  ‘ಶಿವಾಜಿ ಸುರತ್ಕಲ್’ನಲ್ಲಿ ಮೋಡಿ ಮಾಡೋಕೇನೋ ಸಜ್ಜಾಗಿದೆ., ಹಲವು ದಿನಗಳಿಂದ ನಿರೂಪಣೆ,ನಿರ್ದೇಶನ ಅಂತ ಅತ್ತಲೆ ಬ್ಯುಸಿಯಿದ್ದ ಹ್ಯಾಂಡ್ ಸಮ್ ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಮೂಲಕ ಸ್ಯಾಂಡಲ್ ವುಡ್ ನಲ್ಲೊಂದು ಹೊಸ ಅಧ್ಯಾಯ ಸೃಷ್ಟಿಮಾಡ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :