ಸ್ಯಾಂಡಲ್ವುಡ್ನಲ್ಲಿ ತ್ಯಾಗರಾಜ ಅಂತಲೇ ಫೇಮಸ್ ಆಗಿರೋ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ಯಾವುದಾದರೊಂದು ಸಿನ್ಮಾ ಮಾಡ್ತಿದ್ದಾರೆ ಅಂದ್ರೆ ಅಲ್ಲೊಂದು ವಿಶೇಷತೆ ಇರತ್ತೆ. ಸದ್ಯ ನಿರ್ದೇಶನ,ನಟನೆ,ನಿರೂಪಣೆ ಎಲ್ಲದರಲ್ಲೂ ಕ್ರಿಯೇಟಿವ್ ಆಗಿರೋ ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಚಿತ್ರ ಶುರುವಾದಾಗಿನಿಂದ ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿತ್ತು. ನಟ ರಮೇಶ್ ಡಿಟೆಕ್ಟೀವ್ ರೋಲ್ ನಲ್ಲಿ ಕಾಣಿಸಿಕೊಳ್ತಿರೋ ಪೋಸ್ಟರ್ ನೋಡಿದಾಗಲೇ ಕುತೂಹಲ ಇಮ್ಮಡಿಯಾಗಿತ್ತು. ಅದಾದ್ಮೆಲೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ನಲ್ಲಿ