ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ನಡುವೆ ಎಷ್ಟು ಆಪ್ತತೆ ಇತ್ತು ಅನ್ನೋದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ. ಅಪ್ಪುನ ಕಳೆದುಕೊಂಡ ನಂತರದಲ್ಲಿ ಶಿವರಾಜ್ಕುಮಾರ್ ತುಂಬಾನೇ ದುಃಖಿತರಾಗಿದ್ದಾರೆ. ಪ್ರತಿ ವೇದಿಕೆ ಮೇಲೆ ಅಪ್ಪುನ ನೆನಪಿಸಿಕೊಂಡು ಶಿವಣ್ಣ ಭಾವುಕರಾಗುತ್ತಾರೆ. ಈಗ ಹಾಗೆಯೇ ಆಗಿದೆ. ಹೈದರಾಬಾದ್ನಲ್ಲಿ ನಡೆದ ‘ವೇದ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಶಿವಣ್ಣ ಅವರು ಪುನೀತ್ ನೆನೆದು ಭಾವುಕರಾದರು. ಪಕ್ಕದಲ್ಲಿದ್ದ ನಂದಮೂರಿ ಬಾಲಕೃಷ್ಣ ಅವರು ಶಿವರಾಜ್ಕುಮಾರ್ ಅವರನ್ನು ಸಮಾಧಾನ ಮಾಡಿದರು. ಈ ವಿಡಿಯೋ ಸೋಶಿಯಲ್