ಬೆಂಗಳೂರು: ಈ ಗಣೇಶ ಹಬ್ಬಕ್ಕೆ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ತೆರೆಗೆ ಬರಲಿದೆ ಎಂದು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದೆ. ಹಾಗಂತ ಶಿವಣ್ಣ ಅಭಿಮಾನಿಗಳು ಬೇಸರವಾಗಬೇಕಿಲ್ಲ. ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿ ರಿಲೀಸ್ ಆಗಲಿದೆ.ಈ ಸೂಪರ್ ಹಿಟ್ ಸಿನಿಮಾ ತೆರೆಯಲ್ಲಿ ಮತ್ತೆ ಮೂಡಿಬರಲಿದೆ. ಸೂರಿ ನಿರ್ದೇಶನದ ಟಗರು ಸಿನಿಮಾ ಸೆಪ್ಟೆಂಬರ್ 10 ರಂದು ರಿ ರಿಲೀಸ್ ಆಗುತ್ತಿದೆ.