Widgets Magazine

ಭಜರಂಗಿ 2 ನಲ್ಲಿ ಶಿವರಾಜ್ ಕುಮಾರ್ ಭೀಭತ್ಸ ರೂಪ

ಬೆಂಗಳೂರು| Krishnaveni K| Last Modified ಮಂಗಳವಾರ, 14 ಜನವರಿ 2020 (17:55 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಮೊದಲ ದೃಶ್ಯ ನೋಡಿದ ಪ್ರೇಕ್ಷಕರು ಅಬ್ಬಬ್ಬಾ ಎನ್ನುತ್ತಿದ್ದಾರೆ.

 
ಫಸ್ಟ್ ಲುಕ್ ನಲ್ಲಿ ಶಿವಣ್ಣ ಲುಕ್ ಅಷ್ಟು ಭೀಭತ್ಸವಾಗಿದೆ. ಎ ಹರ್ಷ ನಿರ್ದೇಶನದ ಭಜರಂಗಿ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.
 
ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾದ ಕತೆಯೇ ವಿಶಿಷ್ಟವಾಗಿದೆ ಎಂದು ಈ ಪೋಸ್ಟರ್ ನೋಡಿಯೇ ಹೇಳಬಹುದು. ಪೋಸ್ಟರ್ ನೋಡಿರುವ ಪ್ರೇಕ್ಷಕರು ಇದು ಅದ್ಭುತ ಮತ್ತು ಕುತೂಹಲಕಾರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :