ಬೆಂಗಳೂರು: ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ ಇಂದು 60 ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನಕ್ಕೆ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.ಶಿವರಾಜ್ ಕುಮಾರ್ ಸದ್ಯಕ್ಕೆ ವೇದಾ, ನೀ ಸಿಗೊವರೆಗೂ ಎಂಬಿತ್ಯಾದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಹೊಸ ಪೋಸ್ಟರ್ ಗಳು ಇಂದು ಬಿಡುಗಡೆಯಾಗಲಿವೆ.ಅದರ ಹೊರತಾಗಿ ಶಿವಣ್ಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ.