ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಪ್ರಚಾರ ನಿಮಿತ್ತ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಮಾತನಾಡುವಾಗ ಶಿವರಾಜ್ ಕುಮಾರ್ ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.ಜೇಮ್ಸ್ ನಲ್ಲಿ ಪುನೀತ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದಾರೆ. ತಮ್ಮನ ಪಾತ್ರಕ್ಕೆ ಡಬ್ ಮಾಡುವಾಗ ಭಯವಾಗುತ್ತಿತ್ತು. ಮೊದಲು ನಿರ್ದೇಶಕ ಚೇತನ್ ಗೆ ನನ್ನ ಧ್ವನಿ ಬೇಡ ಎಂದೇ ಹೇಳಿದ್ದೆ. ಅವನದ್ದೇ ಧ್ವನಿ ಬಳಸಲು ನೋಡಿದರು, ಮಿಮಿಕ್ರಿಯವರಿಂದ