ಬೆಂಗಳೂರು: ರಾಜಕೀಯ ವಿಚಾರವಾಗಿ ಶಿವರಾಜ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕುಮಾರ್ ಬಂಗಾರಪ್ಪ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.ಶಿವರಾಜ್ ಕುಮಾರ್, ಪತ್ರಿಕಾಗೋಷ್ಠಿಯೊಂದರಲ್ಲಿ ಯಾರ ಪರವಾಗಿಯೂ ಮತ ಕೇಳಲ್ಲ. ಮಧು ಬಂಗಾರಪ್ಪ ಒಳ್ಳೆಯ ಮನುಷ್ಯ. ಅವನು ಸೂಕ್ತ ಎನಿಸಿದರೆ ಜನ ವೋಟ್ ಮಾಡ್ತಾರೆ ಎಂದು ಹಿಂದೊಮ್ಮೆ ಹೇಳಿದ್ದರು. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಶಿವಣ್ಣ ಹೀಗೆ ಹೇಳಿದ್ದಕ್ಕೆ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ರಾಜಕೀಯಕ್ಕೆ ಬರುವುದಾದರೆ ಕವಚ