ಬೆಂಗಳೂರು: ಶಿವರಾಜ್ ಕುಮಾರ್ ತಮ್ಮನ್ನು ಪ್ರೀತಿಸುವವರಿಗೆ ಎಂದೂ ನಿರಾಸೆ ಮಾಡಲ್ಲ. ಎಷ್ಟಾದರೂ ದೊಡ್ಮನೆ ಮಗ. ಹೀಗಾಗಿ ಆ ಗುಣ ಅವರಲ್ಲಿ ಸಹಜವಾಗಿಯೇ ಇದೆ.ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಾವು ತೊಟ್ಟಿದ್ದ ಜಾಕೆಟ್ ನ್ನೇ ಆಂಕರ್ ಅನುಶ್ರೀಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಶಿವಣ್ಣ.ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದು, ‘ನಿಮ್ಮ ಜಾಕೆಟ್ ಚೆನ್ನಾಗಿದೆ ಅಣ್ಣ ಎಂದಷ್ಟೇ ಹೇಳಿದ್ದು, ಅಷ್ಟಕ್ಕೇ ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಎಂದ್ರು.