ಪುನೀತ್ ಬಳಿಕ ಅಣ್ಣ ಶಿವರಾಜ್ ಕುಮಾರ್ ರಿಂದ ಸಿನಿ ಕಾರ್ಮಿಕರಿಗೆ ನೆರವು

ಬೆಂಗಳೂರು| Krishnaveni K| Last Modified ಬುಧವಾರ, 23 ಜೂನ್ 2021 (09:11 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಸಿನಿ ಕಾರ್ಮಿಕರಿಗೆ ನೆರವಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದರು.  
> ಇದೀಗ ಪುನೀತ್ ಹಾದಿಯಲ್ಲೇ ಅಣ್ಣ ಶಿವರಾಜ್ ಕುಮಾರ್ ಕೂಡಾ ಸಾಗಿದ್ದಾರೆ. ಶಿವಣ್ಣ ಕೂಡಾ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ.>   ಈ ಹಣ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡ ಸಿನಿಮಾ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡಲು ಬಳಕೆಯಾಗಲಿದೆ. ಪತ್ನಿ ಗೀತಾ ಹುಟ್ಟುಹಬ್ಬದ ಬೆನ್ನಲ್ಲೇ ಶಿವಣ್ಣ ಕಾರ್ಮಿಕರಿಗೆ ಈ ಉಡುಗೊರೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :