ರವಿಚಂದ್ರನ್ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡಿದ ಶಿವರಾಜ್ ಕುಮಾರ್

ಬೆಂಗಳೂರು| Krishnaveni K| Last Modified ಬುಧವಾರ, 24 ನವೆಂಬರ್ 2021 (09:55 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾದ ಟೈಟಲ್ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಡಿದ್ದಾರೆ. ಈ ಹಾಡನ್ನು ಕಿಚ್ಚ ಸುದೀಪ್ ಲಾಂಚ್ ಮಾಡಿರುವುದು ಇನ್ನೊಂದು ವಿಶೇಷ.

‘ಸಿರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ’ ಎಂದು ಆರಂಭವಾಗುವ ಸಾಲಿನ ಈ ಹಾಡನ್ನು ಶಿವಣ್ಣ ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ವಿಶೇಷವಾಗಿ ಈ ಹಾಡು ಶಿವಣ್ಣ ಇದುವರೆಗೆ ಹಾಡಿರುವ ಹಾಡಿಗಿಂತ ಕೊಂಚ ಭಿನ್ನವಾಗಿದೆ. ಹೈ ಪಿಚ್ ಹಾಡನ್ನು ಶಿವಣ್ಣ ಅದ್ಭುತವಾಗಿ ಹಾಡಿರುವುದು ಸ್ವತಃ ಕಿಚ್ಚ ಸುದೀಪ್ ಗೇ ಅಚ್ಚರಿ ಉಂಟುಮಾಡಿದೆ.


ಹಾಡು ಬಿಡುಗಡೆ ಮಾಡಿದ ಬಳಿಕ ಒಬ್ಬ ಲೆಜೆಂಡ್ ನಟನಿಗೆ ಇನ್ನೊಬ್ಬ ಲೆಜೆಂಡ್ ನಟ ಧ್ವನಿ ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ಈ ಹಾಡು ಕಷ್ಟಕರವಾಗಿದೆ. ಆದರೆ ಶಿವಣ್ಣ ಅದ್ಭುತವಾಗಿ ಹಾಡಿದ್ದಾರೆ. ಎಲ್ಲರೂ ಕೇಳಿ ಪ್ರೋತ್ಸಾಹಿಸಿ ಎಂದು ಸುದೀಪ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :