ಬೆಂಗಳೂರು: ಅಭಿಮಾನಿಗಳಿಂದ ಚಿರ ಯೌವನಿಗ ಎಂದೇ ಕರೆಯಿಸಿಕೊಳ್ಳುವ ಶಿವರಾಜಕುಮಾರ್ ಇಂದು ತಮ್ಮ ಸಿನಿಮಾ ವೃತ್ತಿ ಜೀವನದ 34 ನೇ ವರ್ಷದ ಸಂಭ್ರಮದಲ್ಲಿದ್ದಾರೆ.ಶಿವಣ್ಣ ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 34 ವರ್ಷಗಳೇ ಕಳೆದಿವೆ. ವಿಶೇಷವೆಂದರೆ ಈಗಲೂ ಅದೇ ಉತ್ಸಾಹ, ಎನರ್ಜಿ ಉಳಿಸಿಕೊಂಡಿರುವ ಶಿವರಾಜಕುಮಾರ್ ಈಗಲೂ ನಾಯಕರಾಗಿಯೇ ಮುಂದುವರಿದಿದ್ದಾರೆ.ಇದೇ ಶುಭ ಸಂದರ್ಭದಲ್ಲಿ ಶಿವಣ್ಣ ತಮಿಳು ನಿರ್ದೇಶಕ ರವಿ ಅರಸು ನಿರ್ದೇಶನದಲ್ಲಿ ಮೂಡಿಬರಲಿರುವ ಆರ್ ಡಿಎಕ್ಸ್ ಸಿನಿಮಾ ಸೆಟ್ಟೇರುತ್ತಿದೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ