ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗಿದ್ದರೂ ಚಿತ್ರಮಂದಿರಗಳಿಗೆ ಮಾತ್ರ ಇನ್ನೂ ಸಂಪೂರ್ಣವಾಗಿ ತೆರೆಯಲು ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಚಿತ್ರರಂಗ ಮೇಲೇಳಬೇಕಾದರೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲೇ ಬೇಕು.ಈಗ ಭಜರಂಗಿ 2 ಸೇರಿದಂತೆ ಕೆಲವೊಂದು ಬಿಗ್ ಸಿನಿಮಾಗಳು ಬಿಡುಗಡೆಗೆ ಕಾದು ನಿಂತಿದೆ. ಈ ಸಿನಿಮಾಗಳ ಬಿಡುಗಡೆ ವೇಳೆ ಚಿತ್ರಮಂದಿರಕ್ಕೆ ಶೇ.100 ರಷ್ಟು ತೆರೆಯಲು ಅನುಮತಿ ಸಿಗಬೇಕು ಎಂಬುದು ಸಿನಿಮಂದಿಯ ಒತ್ತಾಯ. ಈ ಎಲ್ಲಾ ವಿಚಾರಗಳ