Photo Courtesy: Twitterಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನೆದರ್ಲ್ಯಾಂಡ್ಸ್ ನಡುವಿನ ಏಕದಿನ ವಿಶ್ವಕಪ್ ಕೊನೆಯ ಲೀಗ್ ಪಂದ್ಯವನ್ನು ನಟ ಶಿವರಾಜ್ ಕುಮಾರ್ ವೀಕ್ಷಿಸಿದ್ದಾರೆ.ಅಪ್ಪಟ ಕ್ರಿಕೆಟ್ ಅಭಿಮಾನಿಯಾಗಿರುವ ಶಿವಣ್ಣ ಐಪಿಎಲ್ ಪಂದ್ಯಗಳ ವೇಳೆಯೂ ಮೈದಾನಕ್ಕೆ ತೆರಳಿ ಚಿಯರ್ ಮಾಡುತ್ತಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಚಿಯರ್ ಮಾಡಲು ಭಾರತದ ಸಮವಸ್ತ್ರ ಧರಿಸಿಯೇ ಮೈದಾನಕ್ಕೆ ಬಂದಿದ್ದಾರೆ.ಇಂದಿನ ಪಂದ್ಯದಲ್ಲಿ ಭಾರತೀಯ ಬ್ಯಾಟಿಗರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು, ಮೈದಾನವೂ ಅಭಿಮಾನಿಗಳಿಂದ ಭರ್ತಿಯಾಗಿದೆ.