ಬೆಂಗಳೂರು: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿರುವ ನಟ ದುನಿಯಾ ವಿಜಯ್ ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಶುಭಾಷಯ ಹೇಳಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ನಟರು ನಿರ್ದೇಶಕರಾಗುವುದು ಹೊಸತೇನಲ್ಲ. ಆ ಸಾಲಿಗೆ ಇದೀಗ ದುನಿಯಾ ವಿಜಯ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹಲವು ವಿವಾದಗಳ ಬಳಿಕ ಇದೀಗ ವಿಜಿ ಸಲಗ ಸಿನಿಮಾ ನಿರ್ದೇಶನದ ಮೂಲಕ ಪುನರಾಗಮನ ಮಾಡುತ್ತಿದ್ದಾರೆ.ದುನಿಯಾ ವಿಜಿಗೆ ಈಗಾಗಲೇ ಕಿಚ್ಚ ಸುದೀಪ್ ಶುಭ ಹಾರೈಸಿದ್ದರು. ಈಗ ಶಿವರಾಜ್ ಕುಮಾರ್ ಸರದಿ.