ಬೆಂಗಳೂರು : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ನಟಿಸಿದ ಟಗರು ಸಿನಿಮಾದ ಕುರಿತಾಗಿ ನಟಿ ಸಿಂಧು ಲೋಕನಾಥ್ ನೀಡಿದ ಹೇಳಿಕೆ ಬಗ್ಗೆ ಇದೀಗ ಶಿವರಾಜ್ ಕುಮಾರ್ ಅಭಿಮಾನಿಗಳು ಪುಲ್ ಗರಂ ಆಗಿದ್ದಾರೆ. ಹೌದು. ನಿರ್ದೇಶಕ ದುನಿಯಾ ಸೂರಿ ಅವರು ನಿರ್ದೇಶಿಸಿರುವ ಟಗರು ಸಿನಿಮಾ ಫೆಬ್ರವರಿ 23 ರಂದು ರಿಲೀಸ್ ಆಗಿ ಇಂದಿಗು ಕೆಲವು ಥೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ವರ್ಷದ ಸೂಪರ್ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ.