ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಲೀಡರ್ ಚಿತ್ರತಂಡ ಶೀಘ್ರದಲ್ಲೇ ಕಾಶ್ಮೀರ ಕಣಿವೆಗೆ ಹೊರಡಲಿದೆ. ತಮ್ಮ ಮುಂದಿನ ಲೀಡರ್ ಚಿತ್ರದ ಶೂಟಿಂಗ್ ಅಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಕೆಲವೊಂದು ಪ್ರಮುಖ ಭಾಗಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿಕೊಳ್ಳಲಿದ್ದು, ಅದಾದ ಬಳಿಕ ಚಿತ್ರ ಕತಾರ್ಗೆ ಪಯಣ ಬೆಳಸಲಿದೆ. ಅಲ್ಲಿ ಹಾಡೊಂದನ್ನುಚಿತ್ರೀಕರಿಸಿಕೊಳ್ಳಲಿದ್ದಾರೆ. ಫೆಬ್ರವರಿ ಕೊನೆಗೆ ಚಿತ್ರೀಕರಣ ಮುಗಿಸಿಕೊಂಡು ಏಪ್ರಿಲ್ ವೇಳೆಗೆ ಚಿತ್ರಮಂದಿರಗಳಲ್ಲಿ ಲೀಡರ್ ಆಟ ಶುರುವಾಗಲಿದೆ. ಬಹುತಾರಾಗಣದ ಈ ಚಿತ್ರದಲ್ಲಿ ಶಿವರಾಜ್