ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಶಿವಪ್ಪ’ ಸಿನಿಮಾದ ಖೈದಿ ಲುಕ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜಕುಮಾರ್ ನಾಯಕರಾಗಿರುವ ಈ ಸಿನಿಮಾದಲ್ಲಿ ಪೃಥ್ವಿ ಅಂಬರ್, ಡಾಲಿ ಧನಂಜಯ್ ಕೂಡಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವಿಡಿಯೋವೊಂದನ್ನು ಇತ್ತೀಚೆಗೆ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆ ವಿಡಿಯೋದಲ್ಲೂ ಜೈಲಿನ ವಾತಾವರಣವಿತ್ತು. ಇದೀಗ ಶಿವಣ್ಣ ಲುಕ್ ಕೂಡಾ ಖೈದಿ ಗೆಟಪ್ ನಲ್ಲಿದೆ. ಹೀಗಾಗಿ ಈ