ಯೂ ಟ್ಯೂಬ್ ನಲ್ಲಿ ದಾಖಲೆ ಮಾಡಿದ ಭಜರಂಗಿ 2 ಟೀಸರ್: ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಶಿವಣ್ಣ

ಬೆಂಗಳೂರು| Krishnaveni K| Last Modified ಗುರುವಾರ, 16 ಜುಲೈ 2020 (10:03 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾದ ಟೀಸರ್ ದಾಖಲೆಯ 1.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಮುನ್ನಗ್ಗುತ್ತಿದೆ.

 
ಅಭಿಮಾನಿಗಳು ಟೀಸರ್ ಗೆ ತೋರಿದ ಮೆಚ್ಚುಗೆ, ಪ್ರತಿಕ್ರಿಯೆಗೆ ಸ್ವತಃ ಶಿವಣ್ಣ ವಿಡಿಯೋ ಸಂದೇಶ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.
 
ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯ, ದೇಶಗಳಲ್ಲೂ ಭಜರಂಗಿ 2 ಮೇಕಿಂಗ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಜತೆಗೆ ಟೀಸರ್ ನಲ್ಲಿ ಶಿವಣ್ಣನ ಲುಕ್, ಫೈಟಿಂಗ್ ದೃಶ್ಯ ನೋಡುಗರಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಹೀಗಾಗಿ ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ ಶಿವಣ್ಣ ಲಾಕ್ ಡೌನ್ ಮುಗಿದ ಕೂಡಲೇ ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :