10 ನಿಮಿಷದ ನೃತ್ಯ ಪ್ರದರ್ಶನಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ?

ಬೆಂಗಳೂರು| pavithra| Last Modified ಶುಕ್ರವಾರ, 28 ಸೆಪ್ಟಂಬರ್ 2018 (09:00 IST)
ಬೆಂಗಳೂರು : ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಟಾಲಿವುಡ್ ನ 'ಗೀತ ಗೋವಿಂದಂ' ಚಿತ್ರದಲ್ಲಿ ನಟಿಸಿದ ನಂತರ ಇವರ ಡಿಮ್ಯಾಂಡ್​​ ಹೆಚ್ಚಾಗಿದೆ.


ರಶ್ಮಿಕಾ ಮಂದಣ್ಣ ನಟಿಸಿರುವ ತೆಲುಗು ಚಿತ್ರ 'ಗೀತ ಗೋವಿಂದಂ' ಚಿತ್ರಕ್ಕೆ ಸಿನಿರಸಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅವರ ಅಭಿನಯ ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಟಾಲಿವುಡ್ ದಿಗ್ಗಜರು ಕೂಡ ಮೆಚ್ಚಿಕೊಂಡಿದ್ದಾರೆ.


ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಡಿಮ್ಯಾಂಡ್​​ ಹೆಚ್ಚಾಗುತ್ತಿದ್ದಂತೆ ಸಂಭಾವನೆಯನ್ನೂ ಕೂಡ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಹೌದು. ಇತ್ತೀಚಿನ ಮಾಹಿತಿ ಪ್ರಕಾರ ಕೇವಲ 10 ನಿಮಿಷದ ನೃತ್ಯ ಪ್ರದರ್ಶನಕ್ಕೆ ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :