ಖಾಸಗಿ ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಶ್ರುತಿ ಹರಿಹರನ್

ಬೆಂಗಳೂರು| Krishnaveni K| Last Modified ಸೋಮವಾರ, 3 ಮೇ 2021 (09:18 IST)
ಬೆಂಗಳೂರು: ತಮ್ಮ ಬಗ್ಗೆ ಸುಳ್ಳು ಸುದ್ದಿ ಪ್ರಚಾರ ಮಾಡಿದ ಕನ್ನಡದ ಖ್ಯಾತ ಖಾಸಗಿ ವಾಹಿನಿ ವಿರುದ್ಧ ನಟಿ ಶ್ರುತಿ ಹರಿಹರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ನಟಿ ಶ್ರುತಿ ಹರಿಹರನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಕೊರೋನಾ ಚಿಕಿತ್ಸೆಗೆ ಪ್ಲಾಸ್ಮಾ ಅಗತ್ಯವಿದ್ದಲ್ಲಿ, ರೆಮ್ ಡಿಸೀವರ್ ಇಂಜಕ್ಷನ್ ಅಗತ್ಯ ಇತ್ಯಾದಿ ವಿಚಾರಗಳ ಬಗ್ಗೆ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಿರುತ್ತಾರೆ.
 
ಇದನ್ನೇ ತಪ್ಪಾಗಿ ತಿಳಿದ ವಾಹಿನಿಯೊಂದು ಶ್ರುತಿ ಹರಿಹರನ್ ತಮ್ಮ ಗೆಳೆಯೊಬ್ಬರಿಗಾಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಡುತ್ತಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಶ್ರುತಿ ಹರಿಹರನ್, ನಾನು ನನ್ನ ಕುಟುಂಬಸ್ಥರು ಕ್ಷೇಮವಾಗಿದ್ದೇನೆ. ನಾನು ಯಾರಿಗಾಗಿಯೂ ಆಸ್ಪತ್ರೆಯಲ್ಲಿ ಬೆಡ್ ಗಾಗಿ ಪರದಾಡಿಲ್ಲ. ಹಿಂದೆ ಮುಂದೆ ನೋಡದೇ ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :