ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ಕ್ಯಾಪ್ಟನ್ ಶೃತಿ. ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದ ವ್ಯಕ್ತಿಯನ್ನು ಸೂಚಿಸಿ, ಕೊರಳಿಗೆ ಬೋರ್ಡ್ ಹಾಕುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಕ್ಯಾಪ್ಟನ್ ಶೃತಿ ಕಳಪೆ ಪ್ರದರ್ಶನ ಬೋರ್ಡ್ ಸ್ಪರ್ಧಿ ದಿವಾಕರ್ ಗೆ ನೀಡಿದರು. ಆದರೆ ಇದರಿಂದ ಕುಪಿತಗೊಂಡ ದಿವಾಕರ್ ಬೋರ್ಡ್ ಹಾಕಿಕೊಳ್ಳಲು ನಿರಾಕರಿಸಿದರು.ನಾನು ಉತ್ತಮವಾಗಿ ಆಟವಾಡಿದ್ದೇನೆ.