ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ಶುಭಮಂಗಳ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಈ ಎವರ್ ಗ್ರೀನ್ ಸಿನಿಮಾವನ್ನು ಯಾರಾದ್ರೂ ಮರೆಯುದುಂಟೇ. .? ಇದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಿರೋದು ಹಳೆ ವಿಷ್ಯ. ಇದೀಗ ಶುಭಮಂಗಳ ಸಿನಿಮಾ ಅಂಗಳದಿಂದ ಸಖತ್ ಮಜವಾಗಿರುವ ಟೀಸರ್ ತುಣುಕು ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.