‘ಅಂಬುಜಾ’ ಆಗಿ ಬಂದ ಶುಭಾ ಪೂಂಜಾ

ಬೆಂಗಳೂರು| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (11:00 IST)
ಬೆಂಗಳೂರು: ಬಿಗ್ ಬಾಸ್ ನಿಂದ ಹೊರಬಂದ ಮೇಲೆ ನಟಿ ಶುಭಾ ಪೂಂಜಾ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಸುದ್ದಿ ಕೊಟ್ಟಿದ್ದಾರೆ.  
> ಈಗಾಗಲೇ ಈ ಸಿನಿಮಾ ಬಗ್ಗೆ ಸುದ್ದಿ ಇತ್ತಾದರೂ ಯಾವುದೇ ಅಪ್ ಡೇಟ್ ಇರಲಿಲ್ಲ. ಈಗ ಶುಭಾ ಪೂಂಜಾ ‘ಅಂಬುಜಾ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.>   ಲಂಬಾಣಿ ಕುಟುಂಬದ ನೈಜ ಕತೆಯಾಧಾರಿತ ಸಿನಿಮಾ ಇದಾಗಿರುವುದರಿಂದ ಶುಭಾ ಪಕ್ಕಾ ಲಂಬಾಣಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿ ಹೇಮಂತ್ ರಾಜು ಈ ಸಿನಿಮಾದ ನಿರ್ದೇಶಕರು. ಈ ಸಿನಿಮಾಗಾಗಿ ಶುಭಾ 20 ಕೆ.ಜಿ. ತೂಕ ಇಳಿಸಿಕೊಂಡು ರೆಡಿಯಾಗಿದ್ದಾರಂತೆ. ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :