ಬೆಂಗಳೂರು: ನಿರೂಪಕಿಯಾಗಿ, ನಟಿಯಾಗಿ ಖ್ಯಾತಿ ಗಳಿಸಿದ್ದ ಶ್ವೇತಾ ಚಂಗಪ್ಪ ಈಗ ಮತ್ತೆ ಕಿರುತೆರೆಗೆ ಆಗಮಿಸುತ್ತಿದ್ದಾರೆ.ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಜೋಡಿ ನಂ.1 ರಿಯಾಲಿಟಿ ಶೋಗೆ ಶ್ವೇತಾ ಚಂಗಪ್ಪ ನಿರೂಪಕಿಯಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಈ ಶೋ ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಪ್ರಸಾರವಾಗಲಿದ್ದು, ನೆನಪಿರಲಿ ಪ್ರೇಮ್, ಮಾಳವಿಕಾ ತೀರ್ಪುಗಾರರಾಗಿದ್ದಾರೆ. ಈ ಮೊದಲು ಜೀ ಕನ್ನಡದಲ್ಲಿ ಯಾರಿಗುಂಟು ಯಾರಿಗಿಲ್ಲ ಶೋ ನಿರೂಪಿಸಿದ್ದ ಶ್ವೇತಾ ಚಂಗಪ್ಪ ಬಳಿಕ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದರು.