ಬೆಂಗಳೂರು: ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ಖ್ಯಾತ ಗಾಯಕ ಸಿದ್ ಶ್ರೀರಾಮ್ ಕನ್ನಡದಲ್ಲಿ ಮತ್ತೊಂದು ಹಾಡು ಹಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಹಾಡೊಂದಕ್ಕೆ ಸಿದ್ ಶ್ರೀರಾಮ್ ಧ್ವನಿ ನೀಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ಕೂಡಾ ಮುಕ್ತಾಯವಾಗಿದೆ. ಏಪ್ರಿಲ್ 19 ಕ್ಕೆ ಹಾಡು ರಿಲೀಸ್ ಆಗುತ್ತಿರುವುದಾಗಿ ಜನ್ಯಾ ಹೇಳಿದ್ದಾರೆ.ಇದು ಸಿದ್ ಶ್ರೀರಾಮ್ ಪಾಲಿಗೆ ಕನ್ನಡದಲ್ಲಿ ಎರಡನೇ ಹಾಡು. ಇದಕ್ಕೂ