ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಎನಿಸಿಕೊಂಡಿರುವ ರಕ್ಷಿತ್ ತಮ್ಮ ಕಿರು ಸಿನಿ ಕೆರಿಯರ್ ನಲ್ಲೇ ಕ್ರಿಯಾತ್ಮಕ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು.40 ನೇ ವರ್ಷಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ 2010 ರಲ್ಲಿ ನಮ್ ಏರಿಯಾಲ್ ಒಂದು ದಿನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಆದರೆ ಅವರಿಗೆ ಬ್ರೇಕ್ ಕೊಟ್ಟಿದ್ದು ಸಿಂಪಲ್ ಆಗಿ ಒಂದು ಲವ್