ಬೆಂಗಳೂರು: ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ.. ಎಂಬ ಜೋಡಿ ಹಕ್ಕಿ ಸಿನಿಮಾದ ಹಾಡನ್ನು ಮೆಚ್ಚದವರು ಯಾರು? ಆದರೆ ಆ ಹಾಡು ಹಾಡಿದ ಕಂಠದ ಒಡೆಯ ಎಲ್ ಎನ್ ಶಾಸ್ತ್ರಿ ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.ಕರುಳಿನ ಕ್ಯಾನ್ಸರ್ ಗೆ ತುತ್ತಾಗಿರುವ ಎಲ್ ಎನ್ ಶಾಸ್ತ್ರಿ ಹಾಸಿಗೆ ಹಿಡಿದಿದ್ದಾರೆ. ಗುರುತೇ ಸಿಗದಷ್ಟು ಕೃಶರಾಗಿದ್ದಾರೆ. ಚಿತ್ರ ಸಂಗೀತದಲ್ಲಿ ತಮ್ಮದೇ ಆದ ಶೈಲಿಯಿಂದ ಕೇಳುಗರಿಗೆ ಮೋಡಿ ಮಾಡಿದ್ದ ಗಾಯಕ ಇಂದು ಅನಾರೋಗ್ಯದಿಂದಾಗಿ ಆರ್ಥಿಕವಾಗಿ ಕಂಗಾಲಾಗಿದ್ದಾರೆ.ಸದ್ಯ ಅವರಿಗೆ