ನವದೆಹಲಿ: ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಸ್ಟಾರ್ಗಳಿಗೆ ಮಾತ್ರ ಫೋನ್ ಬಳಸಲು ಅವಕಾಶ ನೀಡಿದ್ದಕ್ಕೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿರುವ ಎಸ್ ಪಿಬಿ, ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನಿವಾಸದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಫೋನ್ ಗಳನ್ನು ಕಿತ್ತುಕೊಂಡರು. ಆದರೆ ಕೆಲವೇ ಕೆಲವು ಬಾಲಿವುಡ್ ನಟರಿಗೆ ಮಾತ್ರ ಫೋನ್ ಬಳಸಿ