ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಮಗಳು ನಟಿ ಸೋನಂ ಕಪೂರ್ ಅವರ ಮದುವೆ ಬಗ್ಗೆ ಇದೀಗ ವಿವಾದವೊಂದು ಕೇಳಿಬಂದಿದೆ. ಸೋನಂ-ಆನಂದ್ ಮದುವೆಯಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಸಿಖ್ ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ತರಿಸಲಾಗಿತ್ತು. ಇದು ಈಗ ಈ ವಿವಾದಕ್ಕೆ ಕಾರಣವಾಗಿದೆ. ಸೋನಂ ಪತಿ ಆನಂದ್ ಅವರು ಪವಿತ್ರ ಗ್ರಂಥಕ್ಕೆ ನಮಸ್ಕರಿಸುವಾಗ ತಮ್ಮ ಪೇಟಾದಲ್ಲಿದ್ದ ಕಲ್ಗಿಯನ್ನು (ಗರಿಗಳು)