ಬೆಂಗಳೂರು: ನಟಿ ಸೋನು ಗೌಡ ಇದುವರೆಗೆ ವಿಭಿನ್ನ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಇದೀಗ ಮತ್ತೆ ಹಿಂದೆಂದೂ ಮಾಡಿರದ ಪಾತ್ರವೊಂದನ್ನು ಮಾಡಲು ಹೊರಟಿದ್ದಾರೆ.ಯುವಧೀರ ನಿರ್ದೇಶನದ ‘ಗುಡ್ ಗುಡ್ಡರ್ ಗುಡ್ಡೆಸ್ಟ್’ ಎನ್ನುವ ಸಿನಿಮಾದಲ್ಲಿ ಸೋನು ಗೌಡ ಲೈಂಗಿಕ ಕಾರ್ಯಕರ್ತೆಯಾಗಿ ಅಭಿನಯಿಸಲಿದ್ದಾರೆ.ಇದುವರೆಗೆ ಲವ್ವರ್ ಗರ್ಲ್ ಆಗಿ, ಪ್ರಬುದ್ಧ ಮಹಿಳೆಯ ಪಾತ್ರ ಮಾಡಿರುವ ಸೋನು ಗೌಡಗೆ ಇದು ವಿಭಿನ್ನ ಪಾತ್ರವೆಂದೇ ಹೇಳಬಹುದು. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದೆ.