ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಕನ್ನಡ ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಬಾಯ್ ಫ್ರೆಂಡ್, ಮ್ಯಾಕಪ್ ಮ್ಯಾನ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಅಪಾರ್ಟ್ ಮೆಂಟ್ ನಲ್ಲಿ ಸವಿ ಮಾದಪ್ಪ ಜೊತೆಗೆ ಬಾಯ್ ಫ್ರೆಂಡ್ ವಿವೇಕ್ ಕೂಡಾ ವಾಸವಾಗಿದ್ದ ಎಂಬ ಸುದ್ದಿಯಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.ಇದೀಗ ವಿವೇಕ್ ನನ್ನು ಪತ್ತೆ ಮಾಡಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಜೊತೆಗೆ ಮ್ಯಾಕಪ್ ಮ್ಯಾನ್ ಮಹೇಶ್ ನನ್ನೂ ಬಂಧಿಸಲಾಗಿದೆ.