ಚೆನ್ನೈ: ನಿನ್ನೆ ಇಹಲೋಕದ ಯಾತ್ರೆ ಮುಗಿಸಿದ ಸ್ವರ ಮಾಂತ್ರಿಕ ಎಸ್ ಪಿ ಬಾಲಸುಬ್ರಮಣ್ಯಂ ಅಂತ್ಯ ಕ್ರಿಯೆ ಇಂದು ಚೆನ್ನೈನ ಅವರ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.ಎರಡು ಎಕರೆಗಳ ತೆಂಗಿನ ತೋಟದಲ್ಲಿ ಎಸ್ ಪಿ ಬಿ ಚಿರನಿದ್ರೆಗೆ ಜಾರಲಿದ್ದಾರೆ. ಇಂದು ಸುಮಾರು 11 ಗಂಟೆ ಬಳಿಕ ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅವರ ಅಂತ್ಯಕ್ರಿಯೆ ವಿಧಿವಿಧಾನ ನೆರವೇರಲಿದೆ. ಅಂತ್ಯಕ್ರಿಯೆಗೆ ಕೊರೋನಾ ಕಾರಣದಿಂದ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಕೇವಲ ಗಣ್ಯರು ಮತ್ತು ಕುಟುಂಬಸ್ಥರು ಮಾತ್ರ