ಅಪ್ಪು ಅಗಲುವಿಕೆ; ನೇಣಿಗೆ ಶರಣಾದ ಅಭಿಮಾನಿ!

ಹಾಸನ| Ramya kosira| Last Modified ಗುರುವಾರ, 25 ನವೆಂಬರ್ 2021 (08:18 IST)
: ನಟ ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ನೊಂದ ಅಭಿಮಾನಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ನಗರದ ಮಯೂರ ಎಂಬುವವರು ಅಪ್ಪು ನಿಧನದಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ. ಪುನೀತ್ ನಿಧನದ ಬಳಿಕ ಖಿನ್ನತೆಗೊಳಗಾಗಿ ಮಂಕಾಗಿದ್ದ ಮಯೂರ ಇದೀಗ ನೇಣಿಗೆ ಶರಣಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ಹಾಸನದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಪುತ್ರನಾಗಿದ್ದಾರೆ.
ನಟ ಪುನೀತ್ ಅವರ ದೊಡ್ಡ ಅಭಿಮಾನಿಯಾಗಿದ್ದ ಮಯೂರ, ಅಪ್ಪು ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಅವರ ಸಾವಿನ ಬಳಿಕ ಆಘಾತಗೊಂಡು, ಮಾನಸಿಕವಾಗಿ ನೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಅಪ್ಪುವಿನ ಹತ್ತಾರು ಸ್ಟೇಟಸ್ ಹಾಕಿಕೊಂಡು ದುಃಖ ಹೊರಹಾಕುತ್ತಿದ್ದರು. ನೆನ್ನೆ (ನವೆಂಬರ್ 24) ಸಂಜೆ ಹಾಸನ ನಗರದ ರಾಜಕುಮಾರ ನಗರದ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದರಲ್ಲಿ ಇನ್ನಷ್ಟು ಓದಿ :